?೧೨ ಎ.ಎಂ.? ಕಾಶಿಗೆ ಆನೆ ಅವಾಂತರ ಅನುಭವ
Posted date: 11 Sat, Feb 2012 ? 12:00:23 PM

ಹಿರಿಯ ನಿರ್ದೇಶಕ, ನಟ ಕಾಶಿನಾಥ್ ಸಹಾಯಕ ನಿರ್ದೇಶಕರಾಗಿ, ನಿರ್ಮಾಣ ಸಂಸ್ಥೆಯ ತರಬೇತಿ ಮಾಸ್ತರರಾಗಿ ಸಿದ್ಧಪಡಿಸುತ್ತಿರುವ ’೧೨ ಎ.ಎಂ.’ ಕನ್ನಡ ಚಿತ್ರ ಶೇಕಡ ೮೦ ರಷ್ಟು ಚಿತ್ರೀಕರಣವನ್ನು ಮುಗಿಸಿದ್ದು ಬಾಕಿ ಉಳಿದ ಚಿತ್ರೀಕರಣ ಆಗರ ಅರಣ್ಯ ಪ್ರದೇಶದ ಆಸುಪಾಸಿನಲ್ಲಿ ರಾತ್ರಿಯ ಹೊತ್ತು ಚಿತ್ರೀಕರಣ ಮಾಡುತ್ತಿರುವಾಗ ಕಾಡಾನೆಗಳ ಹಾವಳಿಯಿಂದ ಸ್ಥಗಿತಗೊಳಿಸುವ ಸ್ಥಿತಿ ಬಂದಿತು. ಮೊದಲನೆ ದಿವಸ ಚಿತ್ರೀಕರಣ ಮಾಡಿ, ಎರಡನೇ ದಿವಸಕ್ಕೆ ಕಾಲಿಟ್ಟಾಗ ಆಶ್ಚರ್ಯ ಮೂಡುವಂತೆ ’೧೨ ಎ.ಎಂ.’ ಚಿತ್ರತಂಡಕ್ಕೆ ಸಿಡಿiದ್ದುಗಳ ಶಬ್ಧ ಕೇಳಿಸಿತು. ಆಗಲೇ ಬನ್ನೇರುಘಟ್ಟ ಸಮೀಪದ ಅರಣ್ಯ ಅಧಿಕಾರಿ ಕಾಶಿ ತಂಡವನ್ನು ನಿಶ್ಯಬ್ಧವಾಗಿರಲು ಕೋರಿತು. ಒಂದು ಕಡೆ ಸಿಡಿಮದ್ದುಗಳು ಖಾಲಿಯಾಗಿ ವ್ಯಾಲಿ ಸ್ಕೂಲ್ ಬಳಿ ಕಾಡಾನೆಗಳು ಓಡಾಡಿರುವುದನ್ನು ಕಂಡು ಹೇಳಿದ ಅರಣ್ಯಾಧಿಕಾರಿ ಕಾಶಿ ತಂಡವನ್ನು ಇನ್ನಷ್ಟು ಪೇಚಿಗೆ ಸಿಕ್ಕಿಸಿತು.

’೧೨ ಎ.ಎಂ.’ ಸಂಪೂರ್ಣ ರಾತ್ರಿ ಹೊತ್ತಿನಲ್ಲೇ ಚಿತ್ರೀಕರಣ ಮಾಡಿರುವ ಚಿತ್ರ. ಇದೊಂದು ಸಸ್ಪೆನ್ಸ್ ಹಾಗೂ ಹಾರರ್ ಚಿತ್ರ ಎನ್ನುತ್ತಾರೆ ಕಾಶಿನಾಥ್. ಅವರ ಶಿಷ್ಯ ಕಾರ್ತಿಕ್ ಈ ಚಿತ್ರದ ನಿರ್ದೇಶಕರು, ವಿಜಯಕುಮಾರ್, ಪ್ರತಿಮಾ ವಿಜಯಕುಮಾರ್ ಹಾಗೂ ಪ್ರಕಾಶ್ ಚಿತ್ರದ ನಿರ್ಮಾಪಕರು. ನಿರ್ದೇಶಕ ಕಾರ್ತಿಕ್ ಪ್ರಕಾರ ಇಡೀ ತಂಡದ ಲೀಡರ್ ಎಂದರೆ ಕಾಶಿನಾಥ್. ಅವರ ಎಲ್ಲಾ ಅನುಭವವನ್ನು ಈ ಚಿತ್ರದಲ್ಲಿ ಧಾರೆಯೆರೆದಿದ್ದಾರೆ ಎನ್ನುತ್ತಾರೆ ನಿರ್ದೇಶಕರು.

ಕಾಶಿನಾಥ್ ಪುತ್ರ ಅಭಿಮನ್ಯು ಈ ಚಿತ್ರದ ಕಥಾನಾಯಕ. ದಿವ್ಯ ಶ್ರೀಧರ್ ಕಥಾನಾಯಕಿ. ಕಾಶಿನಾಥ್ ಸಹ ವೈದ್ಯಕೀಯ ಕಾಲೇಜಿನ ಪ್ರೊಫೆಸರ್ ಪಾತ್ರವನ್ನು ನಿರ್ವಹಿಸಿದ್ದಾರೆ. ಉಮಾಪತಿ ಛಾಯಾಗ್ರಾಹಕರು.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed